ಕನ್ನಡದ ರಥಕ್ಕೆ ಅದ್ದೂರಿ ಸ್ವಾಗತ | ಶಾಲಾ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ

ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಘೋಷವಾಕ್ಯದೊಂದಿಗೆ ಸಿಂದಗಿ ಪಟ್ಟಣಕ್ಕೆ ಆಗಮಿಸಿತ್ತು. 

ಸಿಂದಗಿ: ತಾಲೂಕಾ ಆಡಳಿತ ಹಾಗೂ ಕನ್ನಡ‌ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಅಭಿಮಾನಿಗಳು ಐದು ಜಿಲ್ಲೆಗಳ ಸಂಚರಿಸಿ ಜಿಲ್ಲೆಗೆ  ಆಲಮೇಲ ತಾಲೂಕಿನಿಂದ ಆಗಮಿಸಿದ ಕರ್ನಾಟಕದ ಸಾಂಸ್ಕೃತಿಕ ಬಿಂಬಿಸುವ ಶೀಲೆಗಳನ್ನು ಹೊತ್ತು ಬಂದಿರುವ ರಥಕ್ಕೆ ಅದ್ದೂರಿ ಸ್ವಾಗತಕೋರಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮುಖಾಂತರ ಬಸವೇಶ್ವರ  ವೃತ್ತ ತಲುಪಿತ್ತು. 

ಜಾಹೀರಾತು

ರಸ್ತೆಯಲ್ಲಿ  ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಹಂದಿಗನೂರಿನ ಶಾಲಾ ಮಕ್ಕಳಿಂದ ಡೊಳ್ಳು ಕುಣಿತ, ಜ್ಞಾನಭಾರತಿ, ಕಾವ್ಯ ಶಿಕ್ಷಣ ಸಂಸ್ಥೆ, ಸ್ವಾಮಿ ವಿವೇಕಾನಂದ ಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಹೀರಾಮಾತಾ ಶಾಲಾ ಮಕ್ಕಳು ಸೇರಿದಂತೆ ಹಲವು ಶಾಲಾ ಮಕ್ಕಳು ಸಾಂಸ್ಕೃತಿಕ ನೃತ್ಯದಲ್ಲಿ ಪಾಲ್ಗೊಂಡಿದ್ದರು. 

 

ತಾಲೂಕಾ ದಂಡಾಧಿಕಾರಿಗಳು ಪ್ರದೀಪಕುಮಾರ್ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ, ಕಾಸಿಂ ಮಕಾಂದಾರ ಕಸಾಪ ಅಧ್ಯಕ್ಷ ಶಿವಾನಂದ ಬಡಾನೂರ, ಚಂದ್ರಶೇಖರ ನಾಗರಬೇಟ್ಟ,  ಹಾಗೂ ತಾಲೂಕಿನ ಆಡಳಿತ ವರ್ಗದ ಸಿಬ್ಬಂದಿಗಳು ಭಾಗವಹಿಸಿದ್ದರು.


Comments

Leave a Reply

Your email address will not be published. Required fields are marked *