ತೀರ್ವ ಹೃದಯಘಾತದಿಂದ ಸಚಿವ ಉಮೇಶ ಕತ್ತಿ ವಿಧಿವಶ

 

 

ಸಚಿವ ಸಂಪುಟದ ಹಿರಿಯ ಸಚಿವ ಅಖಂಡ  ಕರ್ನಾಟಕದ ಮುಖ್ಯಮಂತ್ರಿ ಯಾಗಬೇಕು ಎಂಬ ಆಶಾವಾದಿ ವಿಜಯಪುರ ಜಿಲ್ಲೆಯ  ಉಸ್ತುವಾರಿ ರಾಜ್ಯದ  ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವರು ಆದ ಉಮೇಶ ಕತ್ತಿ ಯವರು ತೀರ್ವ ಹೃದಯಘಾತದಿಂದ ಮೃತ್ತಪಟ್ಟಿದ್ದಾರೆ.

ಡಾಲರ್ಸ್ ಕಾಲೋನಿಯ ಅವರ ನಿವಾಸದ ಬಾತ ರೂಮ್  ನಲ್ಲಿ  ರಾತ್ರಿ  9:30 ರ ಸುಮಾರಿಗೆ ಎದೆ ನೋವು ಕಾಣಿಸಿಕೊಂಡು  ಕುಸಿದು ಬಿದ್ದಿದ್ದು,  ಕುಟುಂಬಸ್ಥರು  ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ದಾಖಲು ಮಾಡಿದರು ಸಹಿತ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯ ತುರ್ತು ಘಟಕದಲ್ಲಿ ಕೊನೆ ಉಸಿರೆಳದ್ದಿದ್ದಾರೆ.